

27th November 2025

ಕಲಾದಗಿ -ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.೨೬ ರಂದು ರಾಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಯಂಕಮ್ಮ ಮಾತನಾಡಿ,
ಸಂವಿಧಾನ ದಿನವನ್ನು ಆಚರಿಸುವುದು ಅಂದರೆ, ಕೇವಲ ಆಚರಣೆ ಮಾತ್ರವಲ್ಲ
ಇದು ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನೆದು, ಅವುಗಳನ್ನು ನಿಷ್ಠೆಯಿಂದ ಪಾಲಿಸುವ ಸಂಕಲ್ಪವನ್ನು ಪುನರುಚ್ಚರಿಸುವ ಕ್ಷಣವಾಗಿದೆ.
ಇದು ನಾಗರಿಕರಾಗಿ ನಾವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವುದರಲ್ಲಿ ನಮ್ಮ ಪಾತ್ರದ ಕುರಿತು ಜಾಗೃತರಾಗಿ ಯೋಚಿಸುವ ದಿನವಾಗಿದೆ. ಈ ಸಂದರ್ಭದಲ್ಲಿ, ನಾವು ನಮ್ಮ ಸಂವಿಧಾನದ ತತ್ವಗಳನ್ನು ಗೌರವಿಸುವುದಾಗಿ,
ಸಮಾನತೆ ಮತ್ತು ಸಹಿಷ್ಣುತೆ ಎನ್ನುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ,
ರಾಷ್ಟ್ರದ ಏಕತೆ ಮತ್ತು ಪ್ರಗತಿಗಾಗಿ ಜವಾಬ್ದಾರಿಯುತ ನಾಗರಿಕರಾಗುವುದಾಗಿ ಸಂಕಲ್ಪಗೊಳ್ಳೋಣ.
ನಮ್ಮ ಸಂವಿಧಾನವು ಕೇವಲ ಕಾನೂನುಗಳ ಸಮೂಹವಲ್ಲ; ಅದು "ನಾವು ಭಾರತೀಯರು" ಎಂದು ಪ್ರಾರಂಭವಾಗುವ ಜನರ ಆತ್ಮಸಾಕ್ಷಿಯ ಪ್ರತಿಧ್ವನಿಯಾಗಿದೆ. ಅದು ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಪ್ರತಿಷ್ಠಾಪಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ಕರಡು ಸಮಿತಿಯು ಅಸಾಧಾರಣ ಅನುಭವ, ಜ್ಞಾನ ಮತ್ತು ದೂರದೃಷ್ಟಿಯಿಂದ ಈ ಮಹತ್ಕೃತಿಯನ್ನು ರಚಿಸಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ.ಎಚ್ .ಬಿ.ಮಹಾಂತೇಶ್ ಅವರು ಮಾತನಾಡಿ,ಸಂವಿಧಾನ ದಿನದ ಆಚರಣೆ ಉದ್ದೇಶವೆಂದರೆ,
ಭಾರತದ ಪ್ರಜೆಗಳಲ್ಲಿ ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಮೂಲಭೂತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು. ನಾಗರಿಕರಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ನೆನಪಿಸುವುದು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವುದಾಗಿದೆ. ಎಲ್ಲರೂ ಸಂವಿಧಾನವನ್ನು ಪಾಲಿಸಲು ಬದ್ಧರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರು, ಸಹ ಪ್ರಾಧ್ಯಾಪಕಿ ಡಾ.ಸರೋಜಿನಿ ಹೊಸಕೇರಿ, ಶ್ರೀದೇವಿ ಮುಂಡಗನೂರ, ಅರ್ಜುನ ನಾಯಕ, ಸಿ.ವಾಯ್.ಮೆಣಸಿನಕಾಯಿ, ಡಾ.ಪುಂಡಲೀಕ ಹುನ್ನಳ್ಳಿ, ಡಾ.ಲೋಕಣ್ಣ ಭಜಂತ್ರಿ, ಮೌಲಾಸಾಬ ಮುಲ್ಲಾ, ಬೈಲಪ್ಪ ಮುಳ್ಳೂರ, ವಿದ್ಯಾರ್ಥಿ , ವಿದ್ಯಾರ್ಥಿನಿಯರು ಇದ್ದರು.
ಕು.ಪವಿತ್ರಾ ಭಜಂತ್ರಿ ಸ್ವಾಗತಿಸಿದರು.
ಕು.ಅಲ್ಪಿಯಾ ಬಾಗವಾನ ನಿರೂಪಿಸಿದರು.
ಕು.ಸಾಧಿಕ ಕಳಸಕೊಪ್ಪ ವಂದಿಸಿದರು.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025